ಆರ್ ಅಶೋಕ್, ಬಿಜೆಪಿ ನಾಯಕನನ್ನ ಟಾರ್ಗೆಟ್ ಮಾಡಿದ ಕಾಂಗ್ರೆಸ್ ಜೆಡಿಎಸ್ | Oneindia Kannada

2018-01-23 3

Triangular fight in Padmanabhanagar assembly constituency, Bengaluru. Vokkaliga community leader and Former Deputy Chief Minister R.Ashoka sitting MLA of the constituency. M.Srinivas, D. Venkatesha Murthy aspirant for Congress ticket. V.K.Gopal JDS candidate for Karnataka Assembly Elections 2018.

ಬೆಂಗಳೂರು ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಪದ್ಮನಾಭನಗರ. ಕ್ಷೇತ್ರದ ಹಾಲಿ ಶಾಸಕರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್.ಅಶೋಕ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಶೋಕ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್‌ ತಂತ್ರ ರೂಪಿಸುತ್ತಿವೆ.

ಆರ್.ಅಶೋಕ ಅವರಿಗೆ ಈ ಬಾರಿ ಗುರು-ಶಿಷ್ಯರೇ ಎದುರಾಳಿಗಳಾಗುವ ಸಾಧ್ಯತೆ ಇದೆ. ಹೌದು. ಒಂದು ಕಾಲದಲ್ಲಿ ಅಶೋಕ ಅವರಿಗೆ ರಾಜಕೀಯ ಗುರುವಾಗಿದ್ದ ಎಂ.ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಅಶೋಕ ಅವರ ಬೆಂಬಲಿಗರಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಡಿ.ವೆಂಕಟೇಶಮೂರ್ತಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಆದ್ದರಿಂದ ಎಂ.ಶ್ರೀನಿವಾಸ, ಡಿ.ವೆಂಕಟೇಶಮೂರ್ತಿ ಅವರಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದರೂ ಅಶೋಕ ಅವರಿಗೆ ಗುರು ಅಥವ ಶಿಷ್ಯರು ಎದುರಾಳಿಗಳಾಗುತ್ತಾರೆ.

ಬಿಜೆಪಿ ವಲಯದಲ್ಲಿಯೇ 'ಬೆಂಗಳೂರಿನ ಸಾಮ್ರಾಟ್' ಎಂದು ಆರ್.ಅಶೋಕ ಕರೆಸಿಕೊಳ್ಳುತ್ತಾರೆ. ಬಲಿಷ್ಠ ಕಾರ್ಯಕರ್ತರ ಪಡೆ, ಬಿಬಿಎಂಪಿ ಸದಸ್ಯರ ಭಾರೀ ಬೆಂಬಲ ಹೊಂದಿರುವ ಅಶೋಕ ಅವರನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವೇನಲ್ಲ

Videos similaires